ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಪಡುಬೆಳ್ಳೆ
ಉಡುಪಿಯಿಂದ ಕಟಪಾಡಿ ಪೇಟೆಯಲ್ಲಿ ಎಡಕ್ಕೆ ತಿರುಗಿ ಸುಭಾಶ್ನಗರ ಮೂಲಕ ಪಾಜಕ ಕ್ಷೇತ್ರದ ಹತ್ತಿರದ ಪಡುಬೆಳ್ಳೆ ಪೇಟೆಯ ಮೂಲಕ ಒಂದು ಕಿ.ಮೀ ಸಾಗಿ ಎಡಕ್ಕೆ ತಿರುಗಿದರೆ ಪಡುಬೆಳ್ಳೆ ಗರೋಡಿ ಸಿಗುವುದು.
ಉಡುಪಿ ಪಡುಬೆಳ್ಳೆಯಲ್ಲಿರುವ ಶ್ರೀ ಬ್ರಹ್ಮ ಬೈದರ್ಕಳ ಗರೋಡಿಯು ಬಹಳ ಪುರಾತನವಾದುದು. ಇದು ಆಯದ ಗರೋಡಿಯಾಗಿದ್ದು
ಷಡಾಧಾರ ಪ್ರತಿಷ್ಠೆಗೊಂಡಿದೆ.
ಸ್ಥಳ ಪುರಾಣದಲ್ಲಿ ತಿಳಿದು ಬಂದಂತೆ, ಪಡುಬೆಳ್ಳೆ- ಮೂಡುಬೆಳ್ಳೆ ನಡುವೆ ಪಾಪನಾಶಿನಿ ನದಿ ಹರಿಯುತ್ತದೆ. ಪಡುಬೆಳ್ಳೆಗೆ ಪಾಪನಾಶಿನಿ ನದಿಯಾಚೆಗಿನ ಮೂಡುಬೆಳ್ಳೆ ಗರೋಡಿ ಮೂಲ ಗರೋಡಿಯಾಗಿತ್ತು. ಹಾಗೇಯೇ ಕಟ್ಟಿಂಗೇರಿಯಲ್ಲಿರುವ ದೈವ ಜುಮಾದಿ ಪ್ರಧಾನವಾಗಿತ್ತು.ಮೂಡುಬೆಳ್ಳೆ ಗರೋಡಿಯಲ್ಲಿ ಏನೇ ಪೂಜೆ ಪುನಸ್ಕಾರಗಳು ನಡೆಯ ಬೇಕಾದರೂ ಪಡುಬೆಳ್ಳೆಯಲ್ಲಿರುವ ಬೆಳ್ಳೆ ದೊಡ್ಡಮನೆ ಯಜಮಾನರು ಉಪಸ್ಥಿತರಿರಲೇ ಬೇಕಿತ್ತು. ಇದು ಅಂದಿನ ಅಳಿಯ ಕಟ್ಟಿನ ವ್ಯವಸ್ಥೆಯಲ್ಲಿ ಅವರಿಗೆ ಬಂದ ಪಟ್ಟ. ಹೀಗಿರುವಾಗ ಒಂದು ಚೌತಿ ಹಬ್ಬದಂದು ಪಾಪನಾಶಿನಿ ಹೊಳೆಯಲ್ಲಿ ನೆರೆಯುಕ್ಕಿದ್ದರಿಂದ ಯಜಮಾನರಿಗೆ ಸಕಾಲದಲ್ಲಿ ಮೂಡುಬೆಳ್ಳೆ ಗರೋಡಿಗೆ ತಲುಪಲಾಗಲಿಲ್ಲ. ಚೌತಿ ಪೂಜೆ ವಿಳಂಬವಾಗುವುದನ್ನು ಕಂಡು ಅಂದು ಅಲ್ಲಿ ಗರೋಡಿಯಲ್ಲಿ ಉಪಸ್ಥಿತರಿದ್ದ ಯಜಮಾನರ ಮಗ ತಾನೇ ಹೊಣೆಗಾರಿಕೆ ವಹಿಸಿಕೊಂಡು ಗರೋಡಿ ಅರ್ಚಕರಿಗೆ ಪೂಜೆ ನೆರವೆರಿಸಲು ಆದೇಶಿಸುತ್ತಾರೆ. ದೊಡ್ಡಮನೆ ಯಜಮಾನರು ಗರೋಡಿ ತಲುಪುವಾಗ ಚೌತಿ ಪೂಜೆ ಮುಗಿದಿತ್ತು. ಇದರಿಂದ ಯಜಮಾನರು ನೊಂದುಕೊಂಡರು. ಪೂಜೆಗೆ ಅನುಮತಿ ನೀಡಿದ್ದು ಅವರ ಸ್ವಂತ ಮಗನೇ ಆಗಿದ್ದರೂ ಅಂದಿನ ಕಟ್ಟುಕಟ್ಟಳೆಯ ಪ್ರಕಾರ ಆತನಿಗೆ ಅಧಿಕಾರವಿರಲಿಲ್ಲ. ಯಾರು ಏನೇ ಹೇಳಿದರೂ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡ ದೊಡ್ಡಮನೆ ಯಜಮಾನರು ಗರೋಡಿಯಲ್ಲಿ ಅರ್ಚಕರಿಂದ ಕಾಯಿ ಕಾಣಿಕೆಯನ್ನು ಪಡೆದು ಕೊಂಡರು. ಶ್ರೀ ಬ್ರಹ್ಮ ಬೈದೇರುಗಳನ್ನು ಪ್ರಾರ್ಥಿಸಿಕೊಂಡು ತಾನು ಪಡುಬೆಳ್ಳೆಗೆ ವಾಪಾಸು ಬರುತ್ತಾರೆ. ಕಟ್ಟಿಂಗೇರಿಯ ದೈವ ಜುಮಾದಿಯನ್ನು ಪ್ರಾರ್ಥಿಸಿಕೊಂಡು ಅಲ್ಲಿಂದಲೇ ತೆಂಗಿನಕಾಯಿ ಹಾರಿಸುತ್ತಾರೆ. ಕಾಯಿ ಬಿದ್ದ ಜಾಗ ಮುಳ್ಳಿನ ಬಲ್ಲೇಯಾಗಿದ್ದರೂ ಅದನ್ನು ಸ್ವಚ್ಛಗೊಳಿಸಿ ಚಪ್ಪರ ಹಾಕಿಸುತ್ತಾರೆ. ಅದೇ ದಿನ ಪಡುಬೆಳ್ಳೆಯಲ್ಲಿ ಚೌತಿ ಪೂಜೆಯನ್ನು ನೇರವೆರಿಸುತ್ತಾರೆ. ಬಳಿಕ ನೂತನ ಗರೋಡಿಯನ್ನು ಕಟ್ಟಿಸುತ್ತಾರೆ.
ಗರೋಡಿಯ ಬ್ರಹ್ಮ ಗುಡಿಯ ಒಳಗೆ ಗುಂಡದಲ್ಲಿ ಕುದುರೆಯೇರಿ ಕುಳಿತ ಬ್ರಹ್ಮರ ಮೂರ್ತಿ, ಗುಂಡದ ಮೇಲಂತಸ್ತಿನಲ್ಲಿ ಗಾಳಿ ದೇವರಿಗೆ ಗಿಂಡೆ ಇವೆ. ಗುಂಡದ ಎಡಬದಿಯಲ್ಲಿ ಉಯ್ಯಾಲೆಯಲ್ಲಿ ಕೋಟಿಚೆನ್ನಯ್ಯರು, ಜೋಗಿ ಪುರುಷ- ಮಂಚ, ಬಲಬದಿಯಲ್ಲಿ: ಕುಜುಂಬ ಕಾಂಜವ-ಮಂಚ, ಒಕ್ಕು ಬಳ್ಳಾಲ- ಮಂಚ, ಬ್ರಹ್ಮಗುಡಿಯ ಹೊರಗೆ ವಾಲಗ ಚಾವಡಿಯಲ್ಲಿ: ಹುಲಿ ಚಾಮುಂಡಿ, ಕೊಳತ ಜುಮಾದಿ. ಮಾಯಂದಾಳ ಮತ್ತು ಮಗು, ಗುರುಕಂಬ ಗಳಿವೆ. ಈ ಗರೋಡಿಯಲ್ಲಿ ಯಾವುದೇ ಪಾಪೆಗಳಿಲ್ಲ. ಮುಂದಿನ ದಿನಗಳಲ್ಲಿ ಪಾಪೆ ಮಾಡುವ ಯೋಜನೆಯಿದೆ.
ಗರೋಡಿ ಆವರಣದಲ್ಲಿ – ಹಾಲೆಮರ ಇದೆ, ಅಯ್ಯ ಕಲ್ಲು, ತುಳಸಿ ಕಟ್ಟೆ ಇದೆ. ಆವರಣದ ಹೊರಗೆ- ನಾಗ ಸನ್ನಿದಿ, ಭೈರವ ದೈವವಿದ್ದು ಇದಕ್ಕೆ ಭೋಗ ಇದೆ.
ಸದಾನಂದ ಪೂಜಾರಿ
ಸದಾನಂದ ಪೂಜಾರಿ, ಗರೋಡಿಮನೆ, ಇವರು 10-4-2008 ರಿಂದ ಪೂಪೂಜನೆಯವರಾಗಿ ಸೇವೆ ಮಾಡುತಿದ್ದಾರೆ.
ಇವರಿಗೆ ಮೊದಲು :
ಆನಂದ ಪೂಜಾರಿ – 1993 -2008 (ಸದಾನಂದ ಪೂಜಾರಿ ಅವರ ತಮ್ಮ)
ಪಪ್ಪು ಪೂಜಾರಿ- 1963-1993 (ಸದಾನಂದ ಪೂಜಾರಿ ಅವರ ತಂದೆ)
ತೌಡ ಪೂಜಾರಿ – 1663 ರ ಮೊದಲು (ಪಪ್ಪು ಪೂಜಾರಿಯವರ ಅಜ್ಜ)
ಇವರಿಗೆ ಮೊದಲು :
ಆನಂದ ಪೂಜಾರಿ – 1993 -2008 (ಸದಾನಂದ ಪೂಜಾರಿ ಅವರ ತಮ್ಮ)
ಪಪ್ಪು ಪೂಜಾರಿ- 1963-1993 (ಸದಾನಂದ ಪೂಜಾರಿ ಅವರ ತಂದೆ)
ತೌಡ ಪೂಜಾರಿ – 1663 ರ ಮೊದಲು (ಪಪ್ಪು ಪೂಜಾರಿಯವರ ಅಜ್ಜ)
ಕಾಂತು ಪೂಜಾರಿ – ತೌಡ ಪೂಜಾರಿಯವರ ಅಣ್ಣ ಇವರುಗಳು ಈ ಸೇವೆಯನ್ನು ಮಾಡುತಿದ್ದರು.
ಸಂತೋಷ ಪೂಜಾರಿ
ಈ ಗರೋಡಿಯ ಬೈದೇರುಗಳ ದರ್ಶನದ ಸ್ಥಳ ಪಾತ್ರಿಗಳಾಗಿ 2005 ರಿಂದ ಸಂತೋಷ ಪೂಜಾರಿ (9845323118) ಇವರು ಸೇವೆ ಮಾಡುತಿದ್ದಾರೆ. ಇವರ ಮೊದಲು ಬೆಳ್ಳೆ ರಾಮ ಪೂಜಾರಿ (ಸಂತೋಷ್ ಪೂಜಾರಿಯವರ ಅಜ್ಜ), ಮೋಹನ್ ಪೂಜಾರಿ (ರಾಮ ಪೂಜಾರಿಯವರ ಮಾವ) ಇವರು ಸ್ಥಳ ಪಾತ್ರಿಗಳಾಗಿದ್ದರು.
ಸುಭಾಶ್ಚಂದ್ರ ಶೆಟ್ಟಿ, ಬೆಳ್ಳೆ ದೊಡ್ಡಮನೆ, ಇವರು ಗರೋಡಿಯ ಮೊಕ್ತೇಸರರು. (ದೂರವಾಣಿ: 9341213275)
ಗರೋಡಿಯಲ್ಲಿ ಸಂಕ್ರಾತಿಯ ದಿನ ಊರು ಸೇರಿ ಗಜ್ಜೆಯಿ ಸೇವೆ ಇದೆ. ಚೌತಿಪೂಜೆ, ಅಷ್ಟಮಿ ಪೂಜೆ ಇದೆ. ಆ ದಿನ ಬೆಳ್ಳೆ ದೊಡ್ಡಮನೆಯವರ ವತಿಯಿಂದ ಅಗೆಲ್ ಅನ್ನ ನೈವೇದ್ಯ ಸೇವೆ ಇದೆ. ದೀಪಾವಳಿಯಂದು ಕಂಬ ನೆಟ್ಟು ದೀಪಾರಾಧನೆ, ಸೋಣ ತಿಂಳಲ್ಲಿ ಚೌತಿ ಹಬ್ಬದ ಮರುದಿನ ಹರಕೆಯ ಹೂವಿನ ಪೂಜೆಗಳು ಜರಗುತ್ತದೆ. ಕದಿರು ಕಟ್ಟುವುದು ಇದೆ. ಸುಬ್ರಹ್ಮಣ್ಯ ಷಷ್ಟಿಯ ಬಳಿಕ ಅಷ್ಟಮಿಯಂದು ಗರೋಡಿ ಮನೆಯ ವತಿಯಿಂದ ಅಗೆಲ್ ಅನ್ನ ನೈವೇದ್ಯ ಸೇವೆ ಇದೆ. ನವಮಿಯಂದು ಕಾಲಾವಧಿ ನೇಮೋತ್ಸವ ಜರಗುತ್ತದೆ. ಬೆಳಿಗ್ಗೆ ಮಾಯಂದಾಳ ನೇಮವಾಗುತ್ತದೆ. ಬಳಿಕ ಜರಗುವ ಶುದ್ಧದ ಅಗೆಲ್ ಅನ್ನ ನೈವೇದ್ಯ ಸೇವೆಯು ಬೆಳ್ಳೆ ಪಟೇಲರ ಮನೆಯ ವತಿಯಿಂದ ಜರಗುತ್ತದೆ.
ಪಡುಬೆಳ್ಳೆ, ಪಾಜಕ ಕ್ಷೇತ್ರ, ಪಾಂಬೂರು, ಪೊದುಮಲೆ, ತಡಂಬೈಲು ಊರುಗಳು ಈ ಗರೋಡಿಯ ಕೂಡುಕಟ್ಟಿಗೆ ಸೇರುತ್ತವೆ. ಸುಮಾರು 250ಕ್ಕೂ ಹೆಚ್ಚು ಮನೆಗಳಿವೆ. ಕೂಡುಕಟ್ಟಿಗೆ ಸೇರಿದ ಜನರು ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭಗಳಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ, ಹೆರಿಗೆ ನಂತರ ತಿಂಗೊಳ್ ಮಾಡಿಸುವ ಕ್ರಮ ಮುಂತಾದ ಹರಕೆಯ ಸೇವೆಗಳಲ್ಲಿ ಪಾಲ್ಗೊಳ್ಳುತ್ತಾರೆ.
ಕೂಡುಕಟ್ಟಿನ ಸಂಪರ್ಕ ಸಂವಹನ :
ಪಟೇಲ್ ಮನೆ- ದಯಾನಂದ ಶೆಟ್ಟಿ , 9482434206
ಬೆಳ್ಳೆ ದೊಡ್ಡಮನೆ- ಸುಭಾಶ್ಚಂದ್ರ ಶೆಟ್ಟಿ
ಸತೀಶ ಪೂಜಾರಿ, ಶೇಖರ ಪೂಜಾರಿ ನಟ್ಟಿಲ್ಲ ಮನೆ – ನಾಲ್ಕರೆ ಗುರಿಕಾರರು
ಉಡುಪಿ- ಉದ್ಯಾವರದ ಮಠ ಉಂಬಳಿ ನೀಡಿದ ಹತ್ತು ಕೊಯಿಲು ಜಾಗದ ಉತ್ಪತ್ತಿಯಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತವೆ. ಇಲ್ಲಿನ
ನೇಮೋತ್ಸವದ ದಿನ ಇಲ್ಲಿಂದ ಉದ್ಯಾವರ ಮಠಕ್ಕೆ ಗೌರವ ಕಾಣಿಕೆ ಸಲ್ಲಿಸುವ ಸಂಪ್ರದಾಯ ಇಂದಿಗೂ ಇದೆ.
10-4-2008 ರಂದು ಗರೋಡಿಯ ಜೀರ್ಣೋದ್ಧಾರ ಹಾಗು ಬ್ರಹ್ಮಕಲಶ ನಡೆದಿದೆ. 22-1-2022 ಹಿತ್ತಾಳೆ ಹೊದಿಕೆಯ ಮಾಡು- ಬ್ರಹ್ಮಕಲಶ, ಬೆಳ್ಳೆ ದೊಡ್ಡಮನೆಯ ಸೀತಾರಾಮ್ ಶೆಟ್ಟಿ ಅವರ ಕೊಡುಗೆಯಾಗಿ ನಡೆದಿವೆ. ಸುಮಾರು 114 ವರ್ಷಗಳ ಮೊದಲು ಗರೋಡಿಯ ಬೈ ಹುಲ್ಲಿನ ಮಾಡು ತೆಗೆದು ಹೆಂಚು ಹೊದಿಸಲಾಗಿತ್ತು.
ಬೂಬ ಪರವ, ಸಂತು ಪರವ, ಅಪ್ಪು ಪರವ ಇವರು ಗರೋಡಿಯ ನೃತ್ಯ ವಿಶಾರದರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹಿಂದೆ ಚಲ್ಲ ಪರವ, ಬೆರ್ಮು ಪರವ, ಕೋತು ಪರವ, ಪಿಜಿನ ಪರವ ಇವರುಗಳು ಈ ಸೇವೆ ಮಾಡಿದ್ದರು.
ಗರೋಡಿಯ ವಿಳಾಸ:
ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಪಡುಬೆಳ್ಳೆ,
ಅಂಚೆ ಕುಂಜಾರುಗಿರಿ,
ಉಡುಪಿ ತಾಲೂಕು & ಜಿಲ್ಲೆ-576116
ಅಂಚೆ ಕುಂಜಾರುಗಿರಿ,
ಉಡುಪಿ ತಾಲೂಕು & ಜಿಲ್ಲೆ-576116
ಪೂಪೂಜನೆಯವರು:
ಸದಾನಂದ ಪೂಜಾರಿ, ಗರೋಡಿಮನೆ, ಪಡುಬೆಳ್ಳೆ
ಅಂಚೆ ಕುಂಜಾರುಗಿರಿ,
ಉಡುಪಿ ತಾಲೂಕು & ಜಿಲ್ಲೆ-576116
ದೂರವಾಣಿ: 9987223184
ಅಂಚೆ ಕುಂಜಾರುಗಿರಿ,
ಉಡುಪಿ ತಾಲೂಕು & ಜಿಲ್ಲೆ-576116
ದೂರವಾಣಿ: 9987223184
ಮಾಹಿತಿ ಸಂಗ್ರಹಿಸಿದ ದಿನಾಂಕ:
17-07-2022
ಮಾಹಿತಿ ನೀಡಿದವರು – ದೊಡ್ಡಮನೆ ವಸಂತ ಶೆಟ್ಟಿ, ಪಟೇಲ್ ಮನೆ ದಯಾನಂದ ಶೆಟ್ಟಿ, ಗರೋಡಿಮನೆ ಸದಾನಂದ ಪೂಜಾರಿ, ಗರೋಡಿಮನೆ ಸಂತೋಷ ಪೂಜಾರಿ
ಮಾಹಿತಿ ಸಂಗ್ರಹಿಸಿದವರು : ದಾಮೋದರ ಕಲ್ಮಾಡಿ, ಚೆಲುವರಾಜ್ ಪೆರಂಪಳ್ಳಿ, ಹರೀಶ್ ಎಮ್. ಕೆ. ಕಲ್ಮಾಡಿ