ಸಾಂತೂರು – ಕೊಡಂಗಳ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ







ಬ್ರಹ್ಮ ಗುಡಿಯ ಹೊರಗೆ ವಾಲಗ ಚಾವಡಿಯಲ್ಲಿ ಬಲಬದಿಯಲ್ಲಿ ಮಣೆ ಮಂಚದಲ್ಲಿ ಪಿಲ್ಚಂಡಿ, ಎಡಬದಿಯಲ್ಲಿ ಮಣೆ ಮಂಚದಲ್ಲಿ ಕೊಡಮಣಿತ್ತಾಯ ಹಾಗೂ ಜಾರಂದಾಯ ದೈವಗಳಿಗೆ ಪೂಜೆಯಿದೆ. ಬ್ರಹ್ಮ ಗುಡಿಯ ಎಡಭಾಗದಲ್ಲಿ ಮಾಯಂದಾಳ್ ಹಾಗೂ ಮಗುವಿನ ಮರದ ಪಾಪೆಯಿದೆ.



ಭರತ್ ಪೂಜಾರಿ
ಮಾರ್ಚ್ 8, 2018ರಿಂದ ಭರತ್ ಪೂಜಾರಿಯಾನೆ ರಾಜು ಪೂಜಾರಿಯವರು ಪೂ ಪೂಜನೆಯ ಸೇವೆ ಮಾಡುತ್ತಿದ್ದಾರೆ. ಇವರಿಗಿಂತ ಮೊದಲು ನಾರಾಯಣ ಪೂಜಾರಿ, ಬೇಚು ಪೂಜಾರಿ, ಕೋಟಿ ಪೂಜಾರಿಯವರು ಈ ಸೇವೆ ಮಾಡುತ್ತಿದ್ದರು. ಬೈದೇರುಗಳ ದರ್ಶನಕ್ಕೆ ಸ್ಥಳ ಪಾತ್ರಿ ಇಲ್ಲಿ ಇಲ್ಲ.
ಗರೋಡಿಯಲ್ಲಿ ದಿನವೂ ದೀಪ ಹಾಕುತ್ತಾರೆ. ಸಂಕ್ರಾಂತಿ ಪೂಜೆ,(ಸೂಡ) ಚೌತಿ ಪೂಜೆ,ದೀಪಾವಳಿ ಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ತುಳುವಿನ ಮಾಯಿ ತಿಂಗಳ ಹುಣ್ಣಿಮೆಯ ನಂತರದ ಏಕಾದಶಿಯಂದು ಗರೋಡಿ ಪ್ರವೇಶ, ಮರುದಿನ ಅಗೆಲು ಸೇವೆ, ಅದರ ಮರುದಿನ ಬೈದೇರುಗಳ ನೇಮ, ಜೋಗಿಪುರುಷ ಕೋಲ, ಅದರ ಮರುದಿನ ಮಾಯಂದಾಲ್ ನೇಮ ನಡೆಯುತ್ತದೆ.
ಗರೋಡಿಯಿಂದ ಸುಮಾರು 4ಕಿ.ಮೀ. ದೂರದಲ್ಲಿರುವ ಆಲ್‌ಉರಿ ಬ್ರಹ್ಮ ಸ್ಥಾನದಲ್ಲಿ 12ವರ್ಷಕ್ಕೊಮ್ಮೆ ಕೋಲ ನಡೆಯುವಾಗ ಗರೋಡಿಯಲ್ಲಿ ಅಗೆಲು ಸೇವೆ ನಡೆದ ನಂತರ ಬೈದೇರುಗಳು ದರ್ಶನದಿದಲ್ಲಿ ಬ್ರಹ್ಮಸ್ಥಾನದವರೆಗೆ ನಡೆದುಕೊಂಡು ಹೋಗಿ ಬೇಟಿಕೊಡುವ ಸಂಪ್ರದಾಯವಿದೆ. ಅಂದು ರಾತ್ರಿ ಜುಮಾದಿ ಮತ್ತು ಬಂಟ, ಜಾರಂದಾಯ ಮತ್ತು ಬಂಟ ಹಾಗೂ ಕೊಡಮಣಿತ್ತಾಯ ದೈವಗಳ ಕೋಲ ನಡೆದ ನಂತರ ಬೇರೆ ಚಪ್ಪರದಲ್ಲಿ ಬೈದೇರುಗಳ ನೇಮ ನಡೆದು ನಂತರ ಪುನ: ದರ್ಶನದಲ್ಲಿ ಹಿಂದೆ ಗರೋಡಿಗೆ ಬರುವುದು. 2011ರಲ್ಲಿ ಕೋಲ ನಡೆದಿದೆ.
ಸಾಂತೂರು ಹಾಗೂ ಪಿಲಾರ್ ಊರುಗಳ ಜನರು ಈ ಗರೋಡಿಯ ಕೂಡುಕಟ್ಟಿಗೆ ಸೇರಿದವರಗಿದ್ದು ಗರೋಡಿಯಲ್ಲಿ ನೀರು ಸ್ನಾನ, ಕಂಚಿಲ್ ಸೇವೆ, ಮದುವೆ ಮುಂತಾದ ಶುಭ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ ಕಾಣಿಕೆ ಸೇವೆ ಮುಂತಾದ ಹರಕೆ ಸೇವೆಗಳಲ್ಲಿ ಭಾಗಿಯಾಗುತ್ತಾರೆ. ಗರೋಡಿಯ ಕಾರ್ಯಕ್ರಮಗಳ ವೆಚ್ಚವನ್ನು ಊರವರ ವರಡ ವಂತಿಗೆ ಕಾಣಿಕೆ ದೇಣಿಗೆಗಳಿಂದ ಭರಿಸಲಾಗುತ್ತದೆ.
11-03-2006ರಲ್ಲಿ ಮಾಯಂದಾಲ್ ಮತ್ತು ಮದುವಿನ ಮರದ ಪಾಪೆಗಳ ಪ್ರತಿಷ್ಠೆ ನಡೆದಿದೆ. 28-02-2007ರಲ್ಲಿ ಚಪ್ಪರದ ನಿರ್ಮಾಣವಾಗಿದೆ.
ಸಂತೋಷ ಪರವ ನೀರೆ ಮತ್ತು ಸಂಘಟಿಗರು ಈ ಗರೋಡಿಯಬ ನೃತ್ಯ ವಿಶಾರದರಾಗಿ ರಮೇಶ ಮಡಿವಾಳ ಮಡಿವಾಳರಾಗಿ, ಶಮ್ಮಿ ಗಫೂರ್ ಮುದರಂಗಡಿ ಇವರು ವಾದ್ಯದವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಗರೋಡಿಗೆ ಸಂಬಂಧಪಟ್ಟ ಕೊಡಂಗಳ ಗರೋಡಿ ಮಹಿಳಾಮಂಡಲ, ಕೊಡಂಗಳ ಗರೋಡಿ ಭಕ್ತವೃಂದಗಳೆಂಬ ಎರಡು ಸಂಘಗಳು ಇಲ್ಲಿ ಕಾರ್ಯನಿರ್ವಹಿಸುತ್ತಿವೆ.
ಗರೋಡಿಯ ವಿಳಾಸ:
ಹಲಸಿನಕಟ್ಟೆ ಅಂಚೆ, ಕಾಪು ತಾಲೂಕು ಉಡುಪಿ – 574113
ಭರತ್ ಯಾನೆ ರಾಜು ಪೂಜಾರಿ – 9611394497