Baidhashree

Shri Kodamannithaya Brahmabaidarkala Neralu Adisthana Garodi

ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ನೇರಳೆ ಅಡಿಸ್ಥಾನ ಗರೋಡಿ. 41 ನೇ ಶೀರೂರು, ಗ್ರಾಮ ಹರಿಖಂಡಿಗೆ

ಉಡುಪಿಯಿಂದ ಹಿರಿಯಡ್ಕ ಮಾರ್ಗವಾಗಿ ಶೀರೂರು ಮೂಲಮಠದ ರಸ್ತೆಯ ಮೂಲಕ ಸಾಗಿ ಹರಿಖಂಡಿಗೆ ಸರಕಾರಿ ಪ್ರಾಥಮಿಕ ಶಾಲೆಯ ಹತ್ತಿರ ಬಲಕ್ಕೆ ತಿರುಗಿ ಸುಮಾರು 350 ಮೀಟರ್ ದೂರ ಸಾಗಿದರೆ ಶ್ರೀ ಕೊಡಮಣಿತ್ತಾಯ ಬ್ರಹ್ಮಬೈದರ್ಕಳ ನೇರಳೆ ಅಡಿಸ್ಥಾನ ಗರೋಡಿ ಸಿಗುವುದು. ಇದೋಂದು ಆಯದ ಗರೋಡಿಯಾಗಿದ್ದು 26.01.1996 ರ   ಜೀರ್ಣೋದ್ಧಾರದ ಸಮಯದಲ್ಲಿ ಷಢಾಧಾರ ಪ್ರತಿಷ್ಠೆಯಾಗಿದೆ. ಗರೋಡಿಯ ಮುಖ್ಯ ದ್ವಾರವು ಪೂರ್ವಾಭಿಮುಖವಾಗಿದ್ದು, ಬಡಗು ದಿಕ್ಕಿಗೆ ಇನ್ನೊಂದು ದ್ವಾರವಿದೆ. ಗರೋಡಿಯ ಆವರಣದಲ್ಲಿ ಬ್ರಹತ್ ನೇರಳೆ ಮರವಿದ್ದು ಅದರ ಅಡಿಯಲ್ಲಿ ಗರೋಡಿ ಇರುವುದರಿಂದ ಈ ಗರೋಡಿಗೆ ನೇರಳೆ ಅಡಿಸ್ಥಾನ ಗರೋಡಿಯೆಂಬ ಹೆಸರು ಬಂದಿದೆ.

ಗರೋಡಿಯ ಆವರಣದಲ್ಲಿರುವ ನೇರಳೆ ಮರ.

ಪ್ರಕಾಶ್ ಪೂಜಾರಿ

ಸುಧಾಕರ ಶೆಟ್ಟಿ

ಇಂದಿಗೆ ಸುಮಾರು ನಾಲ್ಕು ತಲೆಮಾರಿಗೆ ಮುಂಚೆ ಇಲ್ಲಿ ಗರಡಿ ಇಲ್ಲವಾಗಿದ್ದು, ಇಲ್ಲಿಯವರು ಹತ್ತಿರದ ಬೇರೆ ಗರೋಡಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಶೀರೂರು ಮಠದ ಪ್ರತಿನಿಧಿಗೆ ಆ ಗರೋಡಿಯಲ್ಲಿ ಸರಿಯಾದ ಗೌರವ ಸಲ್ಲಲಿಲ್ಲ ಎಂಬ ಕಾರಣಕ್ಕೆ ಕಂರ್ಬುಕಲ್ಲು ಮನೆಯ ಹಿರಿಯರಾದ ತೋಪ ಪೂಜಾರಿಯವರನ್ನು ಕರೆದು ಶೀರೂರು ಮಠದ ಸ್ವಾಮಿಗಳು ಗರೋಡಿ ಸ್ಥಾಪಿಸಿದರು ಎಂಬ ಸ್ಥಳ ಪುರಾಣವಿದೆ. ಅಂದಿನಿಂದ ಕಂರ್ಬುಕಲ್ಲು ಮನೆಯವರು ಗರೋಡಿಯ ಪೂ ಪೂಜನೆಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಕಾಶ್ ಪೂಜಾರಿಯವರ ಮೊದಲು ಅವರ ಹಿರಿಯರಾದ ಬೀರ ಪೂಜಾರಿ, ರಾಮಣ್ಣ ಪೂಜಾರಿ, ಕೂಕ್ರ ಪೂಜಾರಿ ಹಾಗೂ ತೋಪ ಪೂಜಾರಿ ಇವರುಗಳೂ ಪೂ ಪೂಜನೆಯವರಾಗಿ ಸೇವೆ ಸಲ್ಲಿಸಿರುವರು.
ಪ್ರಕಾಶ್ ಪೂಜಾರಿಯವರು (55 ವರ್ಷ ಪ್ರಾಯ) ಬೈದೇರುಗಳ ದರ್ಶನ ಪಾತ್ರಿಗಳಾಗಿಯೂ ಸೇವೆ ಸಲ್ಲಿಸುತ್ತಿದ್ದು,  ಇವರಲ್ಲದೆ ಶ್ರೀ ಕೃಷ್ಣ ಪೂಜಾರಿ, (60 ವರ್ಷ ಪ್ರಾಯ) ಇನ್ನೋರ್ವ ಕೃಷ್ಣ ಪೂಜಾರಿ (55 ವರ್ಷ ಪ್ರಾಯ), ಹರೀಶ್ ಪೂಜಾರಿ (40 ವರ್ಷ ಪ್ರಾಯ) ಹಾಗು ರಂಜಿತ್ ಪೂಜಾರಿ (32 ವರ್ಷ ಪ್ರಾಯ) ಇವರುಗಳು ಒಟ್ಟಿಗೆ ಐದು ಮಂದಿ ಸ್ಥಳ ಪಾತ್ರಿಗಳಾಗಿಸೇವೆ ಸಲ್ಲಿಸುತ್ತಿರುವುದು ಇಲ್ಲಿಯ ವಿಶೇಷತೆ.
ಈ ಗರೋಡಿಗೆ ಸಂಬಂಧಪಟ್ಟಂತೆ ವರಡ ವಂತಿಗೆ ನೀಡುವ ಹರಿಖಂಡಿಗೆ ಗ್ರಾಮದ 16 ಬಿಲ್ಲವ ಸಮಾಜ ಬಾಂಧವರ ಮನೆಯಿದ್ದು, 9 ಬಂಟರ ಮನೆಗಳಿವೆ. ಉಳಿದಂತೆ ಹರಿಖಂಡಿಗೆ ಹಾಗೂ ಸುತ್ತಮುತ್ತಲ ಊರ ಜನರು ಗರೋಡಿಯ ಕಾರ್ಯಕ್ರಮಗಳಲ್ಲಿ ಭಕ್ತಿಯಿಂದ ಪಾಲ್ಗೊಳ್ಳುವರು. ಗರೋಡಿಯಲ್ಲಿ ಮಂಗಳವಾರ ಪೂಜೆ, ಸೋಣ ಮತ್ತು ಆಟಿ ತಿಂಗಳ ಸಂಕ್ರಾಂತಿಗಳಂದು ಪೂಜೆ, ಚೌತಿಪೂಜೆ, ಹೂವಿನ ಪೂಜೆ, ಕದಿರು ಕಟ್ಟುವುದು, ಊರು ಸೇರಿ ಗಜ್ಜೆಯಿ ಸೇವೆ, ಹೊಸ ಭತ್ತದ ಅಗೆಲ್ ಸೇವೆ, ಕಾಲಾವಧಿ ಅಗೆಲ್ ಸೇವೆ, ನೇಮೋತ್ಸವಗಳು ನಡೆಯುತ್ತವೆ. ಕಾಲಾವಧಿ ಅಗೆಲ್ ಹಾಗೂ ನೇಮೋತ್ಸವವು ಸುಗ್ಗಿ ತಿಂಗಳ ಹುಣ್ಣಿಮೆಯಂದು ನಡೆಯುತ್ತವೆ. ಬೈದೇರುಗಳ ಅಗೆಲ್ ಸೇವೆ, ನೇಮೋತ್ಸವದ ಜೊತೆಗೆ ಧರ್ಮರಸು, ರಾಜನ್ ದೈವ, ಜೋಗಿ ಪುರುಷ ಹಾಗೂ ಮಾಯಂದಾಲ್, ದೈವಗಳ ಕೋಲ ಸೆವೆಯೂ ನಡೆಯುತ್ತದೆ
ಈ ಗರೋಡಿಗೆ ಬರ್ಕೆಮನೆ(ಕೇದಗೆ ಮನೆ) ಉದಯ ಪೂಜಾರಿ, ಕಂರ್ಬುಕಲ್ಲು ಮನೆ ಪ್ರಭಾಕರ ಪೂಜಾರಿ, ಪರಾರಿಮನೆ ಅಶೋಕ ಶೆಟ್ಟಿ, ಮೇಲ್ಮನೆ ಸತೀಶ್ ಶೆಟ್ಟಿ, ಕಿನ್ನಿಗುಡ್ಡೆ ಕೀಸು ಶೆಟ್ಟಿ, ತುರ್ಕೆರಬೆಟ್ಟು ಭೋಜ ಶೆಟ್ಟಿ ಇವರುಗಳು ಗುರಿಕಾರರಾಗಿರುತ್ತಾರೆ.
ಶೀರೂರು ಮಠದ ಜಾಗದಲ್ಲಿರುವ ಈ ಗರೋಡಿಗಯ ಕಾರ್ಯಕ್ರಮಗಳು ವರಡ, ವಂತಿಗೆ, ಹರಕೆ ಹಾಗೂ ಊರವರ, ಭಕ್ತರ ಸಹಾಯಧನದಿಂದ ನಡೆಯುತ್ತವೆ.
ಬ್ರಹ್ಮಗುಡಿಯ ಗುಂಡದ ಒಳಗೆ ಬೆರ್ಮೆರು, ಗಾಳಿದೇವರು, ಗುಂಡದ ಹೊರಗೆ ಮಣೆಮಂಚದಲ್ಲಿ ಕೋಟಿ ಚೆನ್ನಯರು, ಕುಜುಂಬ ಕಾಂಜವ, ಹಾಗು ಮಾಯಂದಾಲ್ ರ ಕಂಚಿನ ಮೂರ್ತಿ ಇವೆ.
ಬ್ರಹ್ಮ ಗುಡಿಯ ಹೊರಗೆ ಮಣೆಮಂಚದಲ್ಲಿ ಜೋಗಿಪುರುಷ, ಜುಮಾದಿಯ ಕಂಚಿನ ಮೂರ್ತಿಗಳಿವೆ.
ಗರೋಡಿಯ ಆವರಣದೊಳಗೆ ಧರ್ಮರಸು, ಕೊಡಮಣಿತ್ತಾಯ, ದೈವಗಳ ಗುಡಿ, ದೇವಿಕಟ್ಟೆ, ತುಳಸಿಕಟ್ಟೆ, ಹಾಗೂ ಅಯ್ಯ ಕಲ್ಲುಗಳಿವೆ. ಗರೋಡಿಯಲ್ಲಿ ನೀರುಸ್ನಾನ,ಕಂಚಿಲ್ ಸೇವೆ, ಮದುವೆ ಮುಂತಾದ ಸಂದರ್ಭದಲ್ಲಿ ತೆಗೆದಿಡುವ ಜೋಡುಕಾಯಿ, ಕಾಣಿಕೆ ಸೇವೆ, ಹೆರಿಗೆ ನಂತರದ ತಿಂಗಳು ಮಾಡಿಸುವ ಕ್ರಮ, ತುಲಾಭಾರ, ಕಳಸ ಕಟ್ಟಿ ಶುದ್ದ ಮಾಡುವ, ಕ್ರಮಗಳು ಹರಕೆಯ ರೂಪದಲ್ಲಿ ನಡೆಯುತ್ತದೆ.
ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಗದ್ದಿಗೆ ದೇವಸ್ಥಾನ 41 ನೇ ಶೀರೂರು, ಜಂಬೆ ಇಲ್ಲಿಂದ ದೇವಿಯ ಗದ್ದಿಗೆಯು ಗರೋಡಿಗೆ ಬಂದು ಇಲ್ಲಿ ದರ್ಶನ ಸೇವೆಯೂ ನಡೆಯುತ್ತದೆ.
ಗರೋಡಿಯ ಅಜಲು ಸೇವೆಯ ನೃತ್ಯ ವಿಶಾರದರಾಗಿ ಸುಧಾಕರ ಪರವ ಚೆನ್ನಬೆಟ್ಟು ಹರಿಖಂಡಿಗೆ, ವಾದ್ಯದವರಾಗಿ ಅಣ್ಣಿ ಸೇರಿಗಾರ ಹರಿಖಂಡಿಗೆ, ಮಡಿವಾಳರಾಗಿ ಸಾದು ಮಡಿವಾಳ ದೊಂಡೇರಂಗಡಿ ಇವರುಗಳು ಸೇವೆ ಸಲ್ಲಿಸುತ್ತಿದ್ದಾರೆ.
ಗರೋಡಿಗೆ ಸಂಬಂಧಪಟ್ಟು “ ಬೈದಶ್ರೀಯವಕರ ಸಂಘ” ಎಂಬ ಯುವಕರ ಕೂಟವೊಂದು ಕಾರ್ಯನಿರ್ವಹಿಸುತ್ತಿದ್ದು, ಹರೀಶ್ ಪೂಜಾರಿ ಕಂರ್ಬುಕಲ್ಲು ಇವರು ಪ್ರಸ್ತುತ ಅಧ್ಯಕ್ಷರಾಗಿದ್ದಾರೆ.

ಗರೋಡಿಯ ಪೂರ್ಣ ವಿಳಾಸ:

ಶ್ರೀ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ನೇರಳೆ ಅಡಿಸ್ಥಾನ ಗರಡಿ,
41 ನೇ ಶೀರೂರು, ,br>ಗ್ರಾಮ ಹರಿಖಂಡಿಗೆ,
ಹರಿಖಂಡಿಗೆ ಅಂಚೆ,
ಉಡುಪಿ ತಾಲೂಕು – 576124

ಗರೋಡಿ ಪೂ ಪೂಜನೆಯವರ ವಿಳಾಸ:

ಶ್ರೀ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ನೇರಳೆ ಅಡಿಸ್ಥಾನ ಗರಡಿ,
41 ನೇ ಶೀರೂರು,
ಗ್ರಾಮ ಹರಿಖಂಡಿಗೆ,
ಹರಿಖಂಡಿಗೆ ಅಂಚೆ,
ಉಡುಪಿ ತಾಲೂಕು – 576124

ಕೊಡಮಾಣಿತ್ತಾಯ ಮುಕ್ಕಾಲ್ದಿ ವಿಳಾಸ:

ಸುಧಾಕರ ಶೆಟ್ಟಿ,
ಬೆಟ್ಟುಮನೆ, 41 ನೇ ಶೀರೂರು,
ಹರಿಖಂಡಿಗೆ ಗ್ರಾಮ ಮತ್ತು ಅಂಚೆ,
ಉಡುಪಿ ತಾಲೂಕು – 576124.
ಮೊಬೈಲ್: 78993 09751

ಪ್ರವೀಣ್ ಪೂಜಾರಿ – ಅಧ್ಯಕ್ಷರು, ಆಡಳಿತ ಮಂಡಳಿ

ಮೊಬೈಲ್ : 98803 89859

ಮಾಹಿತಿ ಸಂಗ್ರಹಿಸಿದ ದಿನಾಂಕ:

12-11-2024