Baidhashree

Home

Slide 1

ದಾನಿಗಳ, ಸರಕಾರದ ಅನುದಾನದ ಮೂಲಕ ಕಟ್ಟಿಸಿಕೊಂಡ ನೆಲಮಹಡಿ ಸಮೇತ ನಾಲ್ಕು ಮಹಡಿಗಳ ಸುಸಜ್ಜಿತ ಕಟ್ಟಡದಲ್ಲಿ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ.

Slide 1

ತಾ. 11.12.1988 ರಂದು ಗೋವಿಂದ ಪೈ ಸಂಶೋಧನಾ ಕೇಂದ್ರ, ಎಮ್. ಜಿ. ಎಮ್. ಕಾಲೇಜ್, ಉಡುಪಿ ಇಲ್ಲಿ ವಿದ್ವಜ್ಜನರ ಸಮ್ಮುಖದಲ್ಲಿ ಉದ್ಘಾಟನೆ ಮಾಡುವ ಮುಖಾಂತರ ಸಂಸ್ಥೆಯನ್ನು ಸಮಾಜಕ್ಕೆ ಪರಿಚಯ ಮಾಡಲಾಯಿತು.

Slide 1

1992 ರಲ್ಲಿ ಶ್ರೀ ಬೈದರ ಕೃಪೆಯಿಂದ ಆದಿವುಡುಪಿಯ ಹೃದಯಭಾಗದಲ್ಲಿ 5 ಸೆಂಟ್ಸ್ ಸರಕಾರೀ ಭೂಮಿಯನ್ನು ಖರೀದಿಸಿ ಅದರಲ್ಲಿ ಮೂರು ಅಂತಸ್ತಿನ ಕಟ್ಟಡಕ್ಕೆ ತಾ. 25.11.1993 ರ ಉತ್ಥಾನ ದ್ವಾದಶಿಯಂದು ಕಲ್ಮಾಡಿ ಗರೋಡಿಯ ಅಂದಿನ ಬೈದರ ದರ್ಶನ ಪೂಜಾರಿಯವರಾದ ಮೆನ್ಪ ಪೂಜಾರಿಯವರ ಮುಖಾಂತರ ಜೋಡು ತೆಂಗಿನಕಾಯಿಯಿಟ್ಟು ಪ್ರಾರ್ಥನೆ ಮುಹೂರ್ತ ಮಾಡಲಾಯಿತು.

Slide 1

ವಿಶ್ವಸ್ತರ ಸತತ 6 ವರ್ಷಗಳ ಕ್ಷೇತ್ರಾಧ್ಯಯನದ ಪ್ರತಿಫಲವಾಗಿ “ತುಳುನಾಡ ಗರೋಡಿಗಳ ಸಾಂಸ್ಕೃತಿಕ ಅಧ್ಯಯನ ಗ್ರಂಥ”ವು ತಾ. 03.06.1990 ರಂದು ತುಳುನಾಡ ಗರೋಡಿ ಸಾಂಸ್ಕೃತಿಕ ಸಮ್ಮೇಳನದ ಸಂದರ್ಭದಲ್ಲಿ ಬಿಡುಗಡೆಗೊಂಡಿತು.

Slide 1

ಶ್ರೀ. ಜಯ ಟಿ. ಪೂಜಾರಿ ಮತ್ತು ಶ್ರೀ. ತೋಮರ ಪೂಜಾರಿ ಹಾಗು ಹಲವು ದಾನಿಗಳ ನೆರವಿನಿಂದ ನೆಲ ಅಂತಸ್ತನ್ನು ಪೂರ್ಣಗೊಳಿಸಿ ತಾ. 02.05.1995 ರಂದು ” ಬೈದಶ್ರೀ” ಎಂದು ಕಟ್ಟಡಕ್ಕೆ ನಾಮಕರಣ ಮಾಡಿ ಉದ್ಘಾಟಿಸಲಾಯಿತು.

Slide 1

ಸ್ಥಾಪಕ ವಿಶ್ವಸ್ತ ಮಂಡಳಿ

Slide 1

ನಮ್ಮ ಸಂಸ್ಥೆಯು ಕಾರ್ಕಳದ “ಕೋಟಿ-ಚೆನ್ನಯ ಥೀಮ್ ಪಾರ್ಕ್” ಗೆ 2007-08 ರ ಬಜೆಟ್ ನಲ್ಲಿ ಒಂದು ಕೋಟಿ ರೂಪಾಯಿ ಹಾಗು 100 ಎಕರೆ ಜಮೀನಿನ ಅನುದಾನವನ್ನು ರಾಜ್ಯ ಸರಕಾರದಿಂದ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತದೆ.

previous arrow
next arrow

ಸಂಸ್ಥೆಯ ಬಗ್ಗೆ

ಅನ್ಯಾಯ ಅಧರ್ಮಗಳ ಮೆಟ್ಟಿ ನಿಂತು, ಸದಾ ಸತ್ಯ, ಧರ್ಮ, ನ್ಯಾಯದ ರಕ್ಷಣೆಗಾಗಿ ಹೋರಾಡಿದ ತುಳುನಾಡ ಅವಳಿ ವೀರರಾದ ಕೋಟಿ – ಚೆನ್ನಯರ ವೀರಗಾಥೆ, ಪಾಡ್ದನದಲ್ಲಿ ಉಲ್ಲೇಖವಿರುವಂತೆ “ಏಳ್ ಇರ್ಲು ಎಡ್ಮ ಪಗೆಲ್ ಪನ್ಪಿನಾತುಂಡು”. ಅಂದರೆ ಹೇಳಹೊರಟರೆ ಏಳು ರಾತ್ರಿ ಎಂಟು ಹಗಲು ಸಾಲದು.

ಅಂತಹ ಕೋಟಿ-ಚೆನ್ನಯರ ಕಾಲದಲ್ಲಿ ಅಂಗ ಸಾಧನೆ, ಮಲ್ಲ ಸಾಧನೆಗಳ ಕೇಂದ್ರವಾಗಿದ್ದ, ಇಂದು ಕೋಟಿ -ಚೆನ್ನಯರನ್ನು ಆರಾಧಿಸುತ್ತಿರುವ ಗರೋಡಿಗಳು 250 ಕ್ಕೂ ಹೆಚ್ಚಿವೆ. ಕೋಟಿ – ಚೆನ್ನಯರು ತಮ್ಮ ಜೀವಿತ ಕಾಲದಲ್ಲಿಯೇ 66 ಗರೋಡಿ 33 ತಾವುಗಳನ್ನು ಕಟ್ಟಿಸಿಕೊಂಡಿದ್ದರು ಎಂಬುದು ಇಂದಿಗೂ ಬೈದರ ದರ್ಶನದ ನುಡುಕಟ್ಟಿನಲ್ಲಿದೆ. ಇಂದು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಐನೂರರಿಂದ ಸಾವಿರ ಮನೆಗಳಿಗೊಂದು ಗರೋಡಿಯಿದ್ದು ಕೂಡುಕಟ್ಟಿನ ವ್ಯವಸ್ಥೆಯಿದೆ. ನಂಬುವ ಲಕ್ಷೋಪಲಕ್ಷ ಭಕ್ತರಿದ್ದಾರೆ.

ಗ್ಯಾಲರಿ

ಶ್ರೀ ಬ್ರಹ್ಮ ಬೈದರ್ಕಳ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ಫೋಟೋಗಳು.